
ನಡೆ ನಡೆ ನುಗ್ಗಿ ನಡೆ
ನಡೆ ಸಾಧನೆಯ ಕಡೆ
'ಭಾವ-ವೈಕಲ್ಯ' ಮಾಸುವೆಡೆ
ನಡೆ ಸಾಧನೆಯ ಕಡೆ.............
ನಡೆ ಗುರಿ ಕಾಣೋವೆಡೆ
ಗುರಿಯ ಸೇರೋ ಪಥದಿನಡೆ
'ಹಿಂದಿನದನು' ಮರೆತುನಡೆ
ನಡೆ ಸಾಧನೆಯ ಕಡೆ.............
ಜೀವನಾನುಭವದ ಜೊತೆಗೆನಡೆ
ನಗುತ ನಲಿವ ಮಿಂಚಿನೆಡೆ
'ಎಂದೆಂದಿಗು-ನೀ' ನಿಲದೆನಡೆ
ನಡೆ ಸಾಧನೆಯ ಕಡೆ.............
ಎದುರ ಕಪ್ಪ ಸರೆಸಿನಡೆ
ಹೊಸತನು ಸ್ವಾಗತಿಸಿನಡೆ
'ಕಾಣದ-ಕಡಲ' ಹುಡುಕಿನಡೆ
ನಡೆ ನಿಲದೆ ಸಾಧನೆಯ ಕಡೆ...............