ಮಾತಲಿರುವುದು ಮನದ ತುಣುಕು ಭಾವನೆ
ಎಲ್ಲ ಅಡಕವೂ ಕೊಂಚ ಮೌನದಲ್ಲಿಯೇ
ಸೇರಿ ಮಾತು-ಮೌನ 'ಮಾನ'ವೆಂಬ ಪಯಣ
ಇದನರಿತ ಪೆದ್ದನೂ ಸ್ಥಿಮಿತಲಯದಿ ನುಡಿವನುಮಾತು-ಮೌನದಾ ಸಂಭಾಷಣೆ
ಹೊಸತ ಅರಿಯುವಾ ಹನಿ-ಹನಿಯ ಕಾಣಿಕೆ
ಎಲ್ಲೆ ಇಲ್ಲದಾ ಮೌನದರಮನೇ
ಇಲ್ಲಿರುವರೆಲ್ಲರೂ ಮಾತುಮಲ್ಲರೇ
ನುಡಿವ ಮಾತದು ಗುಣದ ಲಾಂಛನಾ
ಮೌನ ಸ್ಮರಣೆಯೂ ಮನಕೆ ಭೂಷಣ
ಮನದೆಲ್ಲ ಮೌನವೂ ಬಾಲಕೃಷ್ಣಾರ್ಪಣ