Wednesday, February 5, 2025

ಹರಿಣಾಕ್ಷಿ


ಕಂಚಿನಾ ಕಲರವಾ ಕಣ್ಮಿಂಚಲೇ ಸಂಮ್ಮೇಳನ
ಕಾಣದಾ ಆಕರ್ಷಣಾ ಕುಡಿನೋಟದಾ ಪ್ರತಿಸ್ಪಂದನ

ಮನದಳದಲಿ ಅರಳಿಪ ಕಂಪಿನ ಸಂಪದ
ಹುರುಪಿನಅಮಲಲಿ ಹೊಳಪಿನ ಕಾಂತಿನಿ
ನಗೆಹೊನಲಿನ ಚಂದ್ರಿಮೆ ಹರಿಣಾಕ್ಷಿ

ಬದಿನೋಟದಾ ಸುಚಿತ್ರಣಾ ಪದಕುಂಚಕೆನಿಲುಕದಾಕ್ರಂದನ
ನಾಚಿದಾ ತುಟಿತಳಮಳ ಮೂಡಣರವಿ ರಕ್ತಾಂಚನ

ನೊಸಲಿನ ತಟದಿಂ ಇಳಿಜಾರಲಿ ನಾಸಿಕೆ
ಸೇರಿಹ ತುಟಿಗಳ ತಲ್ಲಣಕೆ
ಕಿರಿಚಂದ್ರಿಕೆ ಗಲ್ಲದಿ ತಿರುವುತ ಕಂಠಕೆ
ಹರಿಣಾಕ್ಷಿಯ ಸೊಬಗನು ಬಣ್ಣಿಸುತ