Wednesday, October 24, 2007

ಮೆಘಾಲೋಚನೆ

ನಿಂದಿಹೆನು ನಡುವಿನಲಿ ಬೆಂಬದಿಗೆ ಭಾನು
ಮುಂಬದಿಗೆ ಕಾಣುತಿಹೆ ರಮ್ಯ ಭುವಿ ತಾಣ
ಮನದಿ ನಡೆದಿಹ ಹೊಯ್ದಾಟವನಿಂದು
ಪೇಳ್ವೆನಾ ಸಂತಸದ ಮಹದಾಸೆ ಇಂದು

ಒಗ್ಗೂಡಿ ಬೇಗೊಡಿ ಭುವಿ ಸ್ಪರ್ಶಿಸುವಾಸೆ
ತುಂತುರುಹನಿಯಾಗಿ ತಂಪನು ತುಂಬುವಾಸೆ
ಮಲ್ಲಿಗೆಯ ಮೇಲಿನ ಬೆಳ್ಳಿ-ಚುಕ್ಕೆಯಾಗುವಾಸೆ
ಅರಳಿಹ-ಪುಷ್ಪಕೆ ಮೆತ್ತನೆಯ-ಮುತ್ತಿಟ್ಟು ರಸಿಕತೆಬೀರುವಾಸೆ
ಇಂತಿಹದು ಎನ್ಮನದ ಅನುಭವದ ಬಯಕೆ

ರಭಸದೀ ಧರೆಗಿಳಿದು ಗಿರಿಯ-ತೊರೆಯಾಗುವಾಸೆ
ತಗ್ಗುದಿಣ್ಣೆಯಲೋಡಿ ಹೊಳೆಯಾಗುವಾಸೆ
ಬೃಹದ್ಶಿಲೆಯಲಿ ಹರಿದು ರಂದ್ರ ಚಿತ್ರಿಸುವಾಸೆ
ಹಲವಾರು ಹೊಳೆಯೊಡನೆ ನದಿಯಾಗುವಾಸೆ
ಇಂತಿಹದು ಎನ್ಮನದ ಅನುಭವದ ಬಯಕೆ

ಅಂಕುಡೊಂಕಲಿ ನಡೆದು ಬೋರ್ಗರೆವ ಆಸೆ
ದೈತ್ಯ ಪಾತ್ರದಿನಿಂದು ಶಾಂತಿ ಸೂಚಿಸುವಾಸೆ
ಬೃಹದಾಳಕೆ ಜಿಗಿದು ಜಲಧಾರೆಯಾಗುವಾಸೆ
ಅನನ್ಯ ಜಲಚರಗಳ ಮನೆಯಾಗುವಾಸೆ
ಇಂತಿಹದು ಎನ್ಮನದ ಅನುಭವದ ಬಯಕೆ

ನಾನೀಗ ’ಹನಿ-ಜ್ಞಾನಿ’ ಎನಿಸಿಕೊಳ್ಳುವಾಸೆ
ಹನಿಗಳನು ಕೂಡಿಸುತ ಜ್ಞಾನಸಾಗರ ಸೇರುವಾಸೆ
ಮತ್ತೊಮ್ಮೆ ಮೋಡದೊಳು ಅದ ಹಂಚುವಾಸೆ
ನಿಂತಿಹೆನುನಾನೀಗ ಭುವಿ-ಭಾನಿನಲ್ಲಿ
ಇಂತಿಹದು ಎನ್ಮನದ ಅನುಭವದ ಬಯಕೆ................
ಇಂತಿಹದು ಎನ್ಮನದ ಅನುಭವದ ಬಯಕೆ................

8 comments:

Anonymous said...

Namma Goobege eneno aasegalu :o) Kavite Chennagide!!! - Sudarshan

talegari (ತಾಳೆಗರಿ) said...

ಓಹ್ ಇದು ಬಹಳ technical ಆಗಿಹೋಯ್ತು. ಅದಿರ್ಲಿ
'ಅರಳಿಹ-ಪುಷ್ಪಕೆ ಮೆತ್ತನೆಯ-ಮುತ್ತಿಟ್ಟು ರಸಿಕತೆಬೀರುವಾಸೆ'
- ಈ ಸಾಲನ್ನು ಬರೀಬೇಕಾದ್ರೆ ತಾವೀನು ಯೋಚ್ನೆ ಮಡ್ತಿದ್ರಿ?

ದಡ್ಡಜೀವಿ said...

ಶ್ರೀಕಾಂತನವರೇ................
ಒಂದು ಮಳೆ ಹನಿಯು ಮೆಲ್ಲನೆ ಸುಂದರ ಪುಷ್ಪದ ಮೇಲ್ಬಿದ್ದು ನಿದಾನವಾಗಿ ಚಲಿಸುವ ಪರಿಕ್ಲಪನೆಯಷ್ಟೆ....

talegari (ತಾಳೆಗರಿ) said...

ನಿಮ್ಮ ಕ್ಲಾರಿಫಿಕೇಶನ್ನಿಗೆ ಧನ್ಯವಾದಗಳು .. ನಿಮ್ಮ ಮನಸ್ಸು ಹೆಂಗೆ ಓಡತ್ತೆ ಅಂತ ತಿಳಿಸಿ ಕೊಟ್ರಿ

Unknown said...

I cant read! I cant read!

talegari (ತಾಳೆಗರಿ) said...

Sudhir, kannada displays properly in IE 5.0 or above. I dont know why Mozilla does not offer kannada support?

ಶ್ರೀನಿಧಿ.ಡಿ.ಎಸ್ said...

ನಮಸ್ತೇ ರಘು,

ನಾವೆಲ್ಲ ಎಷ್ಟೋ ಕಾಲದಿಂದ ಅಂತರ್ಜಾಲದಲ್ಲಿ ಬರೀತಿದೀವಿ, ಓದ್ತಿದೀವಿ, ಪ್ರತಿಕ್ರಿಯಿಸಿಕೊಳ್ತಿದೀವಿ, ಮೇಲ್-ಸ್ಕ್ರಾಪ್-ಚಾಟ್ ಮಾಡ್ಕೊಳ್ತಿದೀವಿ.. ಆದ್ರೆ ನಮ್ಮಲ್ಲಿ ಬಹಳಷ್ಟು ಜನ ಪರಸ್ಪರ ಪರಿಚಯ ಮಾಡಿಕೊಂಡಿಲ್ಲ, ಮುಖತಃ ಭೇಟಿ ಆಗಿಲ್ಲ. ಇರಾದೆ ಇದ್ರೂ ಅದು ಸಾಧ್ಯ ಆಗಿಲ್ಲ!

ಇಂತಿದ್ದಾಗ, ನವ ಪ್ರಕಾಶನ ಸಂಸ್ಥೆ ‘ಪ್ರಣತಿ’, ಅಂತರ್ಜಾಲದಲ್ಲಿ ಕನ್ನಡ ಬಳಸುವ ಮತ್ತು ಓದುವ ಎಲ್ಲರನ್ನು ಒಂದೆಡೆ ಸೇರಿಸುವ ಈ ಕಾರ್ಯಕ್ಕೆ ಮುಂದಾಗಿದೆ. ನಾಡಿದ್ದು ಭಾನುವಾರ ನಾವೆಲ್ಲ ಪರಸ್ಪರ ಭೇಟಿಯಾಗುವ ಅವಕಾಶ ಒದಗಿ ಬಂದಿದೆ.

ಡೇಟು: ೧೬ ಮಾರ್ಚ್ ೨೦೦೮
ಟೈಮು: ಇಳಿಸಂಜೆ ನಾಲ್ಕು
ಪ್ಲೇಸು: ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್‌, ಬಸವನಗುಡಿ, ಬೆಂಗಳೂರು

ಆವತ್ತು ನಮ್ಮೊಂದಿಗೆ, ಕನ್ನಡದ ಮೊದಲ ಅಂತರ್ಜಾಲ ತಾಣದ ರೂವಾರಿ ಡಾ| ಯು.ಬಿ. ಪವನಜ, ‘ದಟ್ಸ್ ಕನ್ನಡ’ದ ಸಂಪಾದಕ ಎಸ್.ಕೆ. ಶ್ಯಾಮಸುಂದರ್, ‘ಸಂಪದ’ದ ಹರಿಪ್ರಸಾದ್ ನಾಡಿಗ್, ‘ಕೆಂಡಸಂಪಿಗೆ’ಯ ಅಬ್ದುಲ್ ರಶೀದ್ ಸಹ ಇರ್ತಾರೆ, ಮಾತಾಡ್ತಾರೆ.

ಎಲ್ಲರೊಂದಿಗೆ ಒಂದು ಸಂಜೆ ಕಳೆಯುವ ಖುಶಿಗೆ ನೀವೂ ಪಾಲುದಾರರಾಗಿ ಅಂತ, ‘ಪ್ರಣತಿ’ಯ ಪರವಾಗಿ ಪ್ರೀತಿಯಿಂದ ಆಹ್ವಾನಿಸುತ್ತಿದ್ದೇನೆ. ಈ ಕಾರ್ಯಕ್ರಮದ ಬಗ್ಗೆ ನಿಮ್ಮ ಸ್ನೇಹಿತರಿಗೂ ತಿಳಿಸಿ. ಅವರನ್ನೂ ಕರೆದುಕೊಂಡು ಬನ್ನಿ.

ಅಲ್ಲಿ ಸಿಗೋಣ,
ಇಂತಿ,

ಶ್ರೀನಿಧಿ.ಡಿ.ಎಸ್.

Swaroop Bekal said...
This comment has been removed by the author.