Thursday, October 18, 2012

ಭಾವಾರ್ಥ


ಸುತ್ತರ ಆಗಸದಂಚಿನ ದಿಶೆಗಳ
ನಡುವಿನ ಪಯಣದ 'ತಿಳಿವ' ಜಲ

ಬಿತ್ತರ ಅರ್ಥದ ಅಬ್ಧಿಯೋಳ್ ಅನಿಸುವ
ಅರಿವಿನ ಚುಕ್ಕಿಯ ಗ್ರಹಿಪ ಭವ

ಆಗಮ ನಿರ್ಗಮ ಭಾಸ್ಕರ ಓರ್ವನೆ
ಮೂಡಣ ಪಡುವಣ ಭಿನ್ನ ಭವ

ಉತ್ತರ-ದಕ್ಷಿಣವಾದರೂ ಈ ದಿಶೆಗಳು

ಉದಯಾಸ್ತ ಅರಿವದು ಓರ್ವಪರಿ

ಬದಲಾವಣೆ ಎಂದಿಗೂ ಬದಲಾಗದ ಅರ್ಥವು
ಬದಲಾದರೂ ಭಾವಾರ್ಥ ಬದಲಾವಣೆಯೇ

Friday, April 27, 2012

ಮಾ(ತು ಮೌ)ನ

ಮಾತಲಿರುವುದು ಮನದ ತುಣುಕು ಭಾವನೆ
ಎಲ್ಲ ಅಡಕವೂ ಕೊಂಚ ಮೌನದಲ್ಲಿಯೇ

ಸೇರಿ ಮಾತು-ಮೌನ 'ಮಾನ'ವೆಂಬ ಪಯಣ
ಇದನರಿತ ಪೆದ್ದನೂ ಗೌರವಾನ್ವಿತಾಗ್ವನು

ಮಾತು-ಮೌನದಾ ಸಂಭಾಷಣೆ
ಹೊಸತ ಅರಿಯುವಾ ಹನಿ-ಹನಿಯ ಕಾಣಿಕೆ

ಎಲ್ಲೆ ಇಲ್ಲದಾ ಮೌನದರಮನೇ
ಇಲ್ಲಿರುವರೆಲ್ಲರೂ ಮಾತುಮಲ್ಲರೇ

ನುಡಿವ ಮಾತದು ಗುಣದ ಲಾಂಛನಾ
ಮೌನ ಸ್ಮರಣೆಯೂ ಮನಕೆ ಭೂಷಣ

ಮನದೆಲ್ಲ ಮೌನವೂ ಬಾಲಕೃಷ್ಣಾರ್ಪಣ

Tuesday, October 11, 2011

ನಡೆ

ನಡೆದಂತೆ ನುಡಿನುಡಿದು
ನುಡಿದನಡೆ ಮರೆಯದಿರು


ನಡೆದಿರುವ ಗುಂಗಿನಲಿ, ಮುನ್ನಡೆಗೆ
ಹಿನ್ನಡೆಯ ಮುನ್ನುಡಿಯ ಬರೆಯದಿರು


"ಮುಂದೆ ನಡೆ - ಹಿಂದೆ ನುಡಿ"ಗಳನೇರಿಸಿ ಮುಡಿಗೆ
ನುಡಿದಂತೆ ನಡೆಯುತಿರು ನಡೆಸಲಾಗದ ನುಡಿಯದಿರು                  
                      ಸರ್ವಕಾಲದಲಿ


The translation of a poem fromone language to another, often brings down the charm due to language barrier .... Siddarth Ghosh has given such a great touch in english .... that I think he wrote the poem and I translated it.[21-oct-2011].


                To the lost man 

When oft you speak of things all lost,
Curse the past for all the same
How the words spoken old
Lay forgotten in the sway

When oft drowning in the past
Nostalgic of the things all lost 
Why ink the prologue of descent's hike
Why retrace the steps against the stride.

Why not take the forward march
As been said since time so old
And totter up the onward path
And make it life's frontal goal

Act on words all spoken now
Which have said all along
Yet never again grace all things 
With perfidious favour, the impossibility's score

Let this be done forever and ever
And for all eternity now......

ಹನಿ



ಮನಸಲಿ ಮೌಢ್ಯದ ಕಂದಕ ಮೂಡುತ
ಆಳಗಲವ ಅಳೆದಲೆದಾಡುತಲಿ


'ಜ್ಞಾರ್ಥದ' ಅಸ್ಮಿತೆ ಮೂಢನೂ ಆಲಿಪ
ಅಂತರಾಳದ ಚಿಲುಮೆಯ ಮಂದಶೃತಿ


ಕಣ-ಕಣ ಕಂದಕ ವಿಮರ್ಶಿಸಿ ಚರ್ಚಿಪೆ
ಒಳಹರಿವುದು 'ಹನಿ-ಭವ' ಗೂಡುತಲಿ


ನಿಲುಕದ ಆಳದ ಅರಿವಿನ ಹೊಳಪು
'ನಾ'ನ್ನೆನ್ನುವ ತಿಮಿರದ ಅಳಿವಿನ ಬೆಳಕು


ಹನಿಗಳಲೊಬ್ಬನಾಗಲು ದುಡಿದೊಡೆ
ತೊರೆಹೊಳೆನದಿಗಳ ಸಾಗರವು


ಹರಿವಲಿ 'ನಾ'ಅಗಲಲು ಜಿಗಿದೊಡೆ
ಎಲೆಶಿಲೆಮಣ್ಣಲಿ ನಶ್ವರವು


ತುಂಬುತ ಕಂದಕ ತೊರೆಯಾಗುವ ತವಕ
ಜುಳು-ಜುಳು ನಾದದಿ ನದಿ ಸೇರುವ ಮನಕ


ನದಿಯಲಿ ಸಾಗರವೆನ್ನುವ ಪುಳಕ
ಸಾಗರದಲಿ ಕರಗುತ ಹನಿಯಾಗುವ ತನಕ ....
...... ಮರು 'ಹನಿ'ಯಾಗುವ ತನಕ

Tuesday, May 24, 2011

ಮನ-ಕಿಡಿಗಳು

ರಾಜ್ಯೋತ್ಸವಕ್ಕಾಗಿ
ಎನ್ನನು ಬಿಂಬಿಸೊ ಕನ್ನಡಿ ಮನವು
ಬೊಂಬಿತ ಬೆಳಕದು ಕನ್ನಡವು
ಕನ್ನಡ ಬೆಳಕದು ಮನದಿಂಬೆಳಗಲು
ಕಥೆ-ಕವನವ ಎನ್ನಲಿ ಕಾಣುವೆನು
ಹರುಷದಿ ನಲಿಯುತ ಬರೆಯುವೆನು
ಕನ್ನಡ ಬೆಳಕಲಿ ನಡೆದಿಹೆನು

ಲೇಖನ 
ಗೀಚುವ ಹಾಳೆಯ ಹಿಂದಿನ ಸಾಲು
ಬಾಳಿದ ಮರಗಳ ನೋವಿನ ಪಾಲು
ಅನುಭವ ಬೇರಲಿ ಮೂಡುವ ಕಾವ್ಯದ
ಅರ್ಥದ ಚಿಗುರಲಿ ಅರಳುವ ಚೇತನ
ಮರು ಜೀವವ ತುಂಬುವ ಯತ್ನದ ಲೇಖನ

Wednesday, July 15, 2009

ಮಂದಾರ ಗೊಂಬೆ

ಸ್ವಪ್ನದ ಲೋಕಾ ಕಿನ್ನರಿ ಗೀತೆ
ಪೆಳುವೆ ಈಗ ಚೆಲುವೆಯಾ ಕಥೆ

ಓಮ್ಮೆ ರಾತ್ರಿಲಿ ಚಂದಿರ ಬಂದ್ಯಾನೋ
ಬೆಳದಿಂಗಳಾ ಎಲ್ಲೆಡೆ ಚಲ್ಯಾನೋ

ಹೂವ ತೋಟವಾ ಇಣುಕಿ ನೊಡ್ಯಾನೋ
ಮಲ್ಲೆ ಸಂಪಿಯರ ಸಪ್ಪೆ ಮೊಗವಾ ಕಂಡ್ಯಾನೋ

ಏಕೆ ಹೀಗೆಂದೂ ಮುನ್ನಡೆದು ತಿಳಿದ್ಯಾನೋ
ಚೆಲುವಿಯ ಮೊರೆಗೆ ಬೆರಗಾಗಿ ನಿಂತ್ಯಾನೋ

ತನ್ನಯ ಕಾಲಾ ಕ್ರಮಿಸಿತೆಂದು
ಮುಂಜಾನೆ ಮುನ್ನ ನಾಚಿಓಡ್ಯಾನೋ

ಆ ಚೆಲುವು ಎಂತೆಂದು ಕಲ್ಪಿಸುತಲಿ
ಎನ್ನ ಮುಂದೆ ನಾ ಕಂಡೆ ಆ ಮಂದಾರ ಗೊಂಬೆ...... ಮಂದಾರ ಗೊಂಬೆ.....

Saturday, July 11, 2009

ಅರಿಯದ ಆಮಿಶ


ಬೆಟ್ಟದ ನಾರಿ ಚೆಲುವಿನ ಮಾರಿ
ಅವಳೆಡೆ ಹೊರೆಟರೆ ಜಾರುವ ದಾರಿ

ಬಂಡೆಯ ಬಲವೋ ಮನಸಿನ ಛಲವೋ
ನಾನೀಗಿರುವೆನು ಬೆಟ್ಟವನೇರಿ

ಗಗನವನೇರುವ ಹಂಬಲವೆನ್ನ
ಸೆಳೆದಿದೆ ಅರಿಯದ ಆಮಿಶದೆಡೆಗೆ

ಬಾಗಿದ ಬಂಡೆಯ ಅಡಿಯಲಿ ಹಸಿರೋ
ಬಾಗುತ ನಡೆವನ ಮುಡಿಗದು ಗೆಲುವೋ

ನೀರಿನ ಬಣ್ಣ



ಬದುಕಲಿ ಮುದುಕೆಲೆ ಉದುರಿಹೋಗುವ ಮುನ್ನ
ಹಸಿರಲಿ ನಗುತೈತಿ ಓಮ್ಮೆ ಹಾಂಗಾ
ಕೆಲವೊಮ್ಮೆ ಎಲೆಯೊಳು ಹಳದಿ ತುಂಬಲು ತಾನು
ಉದುರಿಹೋಗುತ್ತಾ ನಗುವ ಮುನ್ನ

ಎಲೆಗೊಂದು ಕಥೆಯೋ ಹೂಗೊಂದು ವೆಥೆಯೋ
ಕಾಯ್ಗಳ ಕಳವಳ ನೂರಒಂದ
ಹೊಸಗಿಡಕಿದು ಪಾಠ ಹಳೆಮರಕಾ ದಿನದಾಟ
ನಡಿತೈತಿ ಕಾಲವು ಹೀಗೆ ಎಂದು

ಎಲೆಯ ಪಂಕ್ತಿ ನಿಂದ ಹೂವ ಜಾತಿ ನಿಂದ
ಕಾಯ್ಗಳ ಸಂಭಂದಿ ನೀನು ಎಂದ
ತಿಳಿದು ನೀ ಯಾರೆಂದು ಅರಿತು ಕಾರ್ಯವ ನಿಂದು
ನಡೆ ಗುರಿಎಡೆ ನದಿ ಹರಿವಹಾಂಗ

ನಂಬುಗೆಯೇ ದೇವ ಕಾಯಕವೇ ಪೂಜೆ
ನಡೆವ ಪಥವೆ ನಿನ್ನ ಸಾಧನವೂ
ಹುರುಳಿಲ್ಲದಾ ಬಾಳು ಕೊನೆ ಇಲ್ಲದಾ ಜಾತ್ರಿ
ನೀರಿನಬಣ್ಣದ ಜೀವನವು.... ನೀರಿನಬಣ್ಣದ ಜೀವನವು................ 


My in depth gratitude to Mr. Siddharth Ghosh, whom I met in RRI when I joined as VSP, for translating this poem in english. {05/Aug/2010}

COLORLESS

The leaf so old ere it withers away
Rejoice, will once, in the joy of green.
But, alas its fate to, fade away
Ere its rejoicing and merriment done.

Each leaf so green has a tale to tell
Each bud that blossoms; its song of grief.
The fruit that hangs so ripe on the tree, will
still lament its miseries to thee.
To the sapling in the heart of the earth,
this will always have a lesson new
But, it is the chore of life to the grandest tree
For such is the way of "Time" .

What from leaves or flowers or fruits so sweet
Hail you to your place down here?
Realisation thus; may mark your path
like a river to its goal.

Beilef is thy God and work thy worship
The path thou trod; thy achievement is
The void of life; an endless fair
For this is the color of water.

Wednesday, October 24, 2007

ಮೆಘಾಲೋಚನೆ

ನಿಂದಿಹೆನು ನಡುವಿನಲಿ ಬೆಂಬದಿಗೆ ಭಾನು
ಮುಂಬದಿಗೆ ಕಾಣುತಿಹೆ ರಮ್ಯ ಭುವಿ ತಾಣ
ಮನದಿ ನಡೆದಿಹ ಹೊಯ್ದಾಟವನಿಂದು
ಪೇಳ್ವೆನಾ ಸಂತಸದ ಮಹದಾಸೆ ಇಂದು

ಒಗ್ಗೂಡಿ ಬೇಗೊಡಿ ಭುವಿ ಸ್ಪರ್ಶಿಸುವಾಸೆ
ತುಂತುರುಹನಿಯಾಗಿ ತಂಪನು ತುಂಬುವಾಸೆ
ಮಲ್ಲಿಗೆಯ ಮೇಲಿನ ಬೆಳ್ಳಿ-ಚುಕ್ಕೆಯಾಗುವಾಸೆ
ಅರಳಿಹ-ಪುಷ್ಪಕೆ ಮೆತ್ತನೆಯ-ಮುತ್ತಿಟ್ಟು ರಸಿಕತೆಬೀರುವಾಸೆ
ಇಂತಿಹದು ಎನ್ಮನದ ಅನುಭವದ ಬಯಕೆ

ರಭಸದೀ ಧರೆಗಿಳಿದು ಗಿರಿಯ-ತೊರೆಯಾಗುವಾಸೆ
ತಗ್ಗುದಿಣ್ಣೆಯಲೋಡಿ ಹೊಳೆಯಾಗುವಾಸೆ
ಬೃಹದ್ಶಿಲೆಯಲಿ ಹರಿದು ರಂದ್ರ ಚಿತ್ರಿಸುವಾಸೆ
ಹಲವಾರು ಹೊಳೆಯೊಡನೆ ನದಿಯಾಗುವಾಸೆ
ಇಂತಿಹದು ಎನ್ಮನದ ಅನುಭವದ ಬಯಕೆ

ಅಂಕುಡೊಂಕಲಿ ನಡೆದು ಬೋರ್ಗರೆವ ಆಸೆ
ದೈತ್ಯ ಪಾತ್ರದಿನಿಂದು ಶಾಂತಿ ಸೂಚಿಸುವಾಸೆ
ಬೃಹದಾಳಕೆ ಜಿಗಿದು ಜಲಧಾರೆಯಾಗುವಾಸೆ
ಅನನ್ಯ ಜಲಚರಗಳ ಮನೆಯಾಗುವಾಸೆ
ಇಂತಿಹದು ಎನ್ಮನದ ಅನುಭವದ ಬಯಕೆ

ನಾನೀಗ ’ಹನಿ-ಜ್ಞಾನಿ’ ಎನಿಸಿಕೊಳ್ಳುವಾಸೆ
ಹನಿಗಳನು ಕೂಡಿಸುತ ಜ್ಞಾನಸಾಗರ ಸೇರುವಾಸೆ
ಮತ್ತೊಮ್ಮೆ ಮೋಡದೊಳು ಅದ ಹಂಚುವಾಸೆ
ನಿಂತಿಹೆನುನಾನೀಗ ಭುವಿ-ಭಾನಿನಲ್ಲಿ
ಇಂತಿಹದು ಎನ್ಮನದ ಅನುಭವದ ಬಯಕೆ................
ಇಂತಿಹದು ಎನ್ಮನದ ಅನುಭವದ ಬಯಕೆ................

Scribbling Thoughts

Today, I am amidst the valley. To get a bird view I need to climb one of the peaks. It seems valley is comfortable, beautiful and filled with the routine needs, but the experiences and thoughts I have gathered along the journey to this valley fills me with thunderstorms, roaring aloud to run against rugged slopes of a mountain which I saw miles down the lane.

This is the spark of start I wanted in me to burn up the entire mountain. Even after this, still I feel something I lack to cut across the slippery slopes, to grip the vertical rocks, and pull out of the thorny bushes to sigh on a little rock, turn around, take a deep breath seeing the majestically rustic beauty of the valley to sense the challenging air, just to go back and climb the peak miles ahead in 'time and thoughts'. Wherever I stop to gallop the gusts of air, I celebrate the tiny group of steps I accomplished, although at times I think these little celebrations bring down the altitude I would gather without them, but they have become inseparable difficulty merging with the torments of the accent. Best thing to do is to change the techniques I followed, and to adapt new ones to get a new view of the old valley.

Oh! Mighty mountain....... oh mighty mountain......
I saw you down the lane, started towards you
But I tumbled very early to take a wrong route
I never imagined, landing in your valley
Starting the adjacent peak, you vanished from thoughts
But in times before, only you were in the scene
Again, only you are in the scene
Oh! Mighty mountain....... oh mighty mountain......