Tuesday, October 11, 2011

ಹನಿ



ಮನಸಲಿ ಮೌಢ್ಯದ ಕಂದಕ ಮೂಡುತ
ಆಳಗಲವ ಅಳೆದಲೆದಾಡುತಲಿ


'ಜ್ಞಾರ್ಥದ' ಅಸ್ಮಿತೆ ಮೂಢನೂ ಆಲಿಪ
ಅಂತರಾಳದ ಚಿಲುಮೆಯ ಮಂದಶೃತಿ


ಕಣ-ಕಣ ಕಂದಕ ವಿಮರ್ಶಿಸಿ ಚರ್ಚಿಪೆ
ಒಳಹರಿವುದು 'ಹನಿ-ಭವ' ಗೂಡುತಲಿ


ನಿಲುಕದ ಆಳದ ಅರಿವಿನ ಹೊಳಪು
'ನಾ'ನ್ನೆನ್ನುವ ತಿಮಿರದ ಅಳಿವಿನ ಬೆಳಕು


ಹನಿಗಳಲೊಬ್ಬನಾಗಲು ದುಡಿದೊಡೆ
ತೊರೆಹೊಳೆನದಿಗಳ ಸಾಗರವು


ಹರಿವಲಿ 'ನಾ'ಅಗಲಲು ಜಿಗಿದೊಡೆ
ಎಲೆಶಿಲೆಮಣ್ಣಲಿ ನಶ್ವರವು


ತುಂಬುತ ಕಂದಕ ತೊರೆಯಾಗುವ ತವಕ
ಜುಳು-ಜುಳು ನಾದದಿ ನದಿ ಸೇರುವ ಮನಕ


ನದಿಯಲಿ ಸಾಗರವೆನ್ನುವ ಪುಳಕ
ಸಾಗರದಲಿ ಕರಗುತ ಹನಿಯಾಗುವ ತನಕ ....
...... ಮರು 'ಹನಿ'ಯಾಗುವ ತನಕ

No comments: